Chief Editor
Manohar. R (Manu)
Photo Journalist
chitrataramanu@gmail.com
+91 9845549026
`ನಿನ್ನಿಂದಲೇ` ಈ ವಾರ ಬಿಡುಗಡೆ
Posted date: 13 Mon, Jan 2014 – 05:53:19 PM

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಬಹಳ ಕಾತುರತೆ ಇಂದ ಕಾಯುತ್ತಿದ್ದ ಹೊಂಬಾಳೆ ಫಿಲ್ಮ್ಸ್ ಅವರ ಮೊದಲ ಕಾಣಿಕೆ `ನಿನ್ನಿಂದಲೇ` ನಿರ್ದೇಶಕ ಜಯಂತ್ ಪರಂಜಿ ಅವರ ಮೊಟ್ಟ ಮೊದಲ ಕನ್ನಡ ಸಿನೆಮಾ ಈ ಗುರುವಾರವೇ ತೆರೆ ಕಾಣುತ್ತಿದೆ. ಮೊಟ್ಟ ಮೊದಲ ಭಾರಿಗೆ ಏರಿಕ ಫೆರ್ನಾಂಡೇಜ್ ಅವರು ನಾಯಕಿ ಆಗಿ ಅಭಿನಯಿಸಿರುವ ಚಿತ್ರವನ್ನು  ದಕ್ಷಿಣ ಭಾರತದಲ್ಲಿ ಅತ್ಯಂತ ಯಶಸ್ವಿ ಚಿತ್ರ ನಿರ್ದೇಶಕರಲ್ಲಿ ಒಬ್ಬರಾದ ಜಯಂತ್ ಪರಂಜಿ ಅವರು ನಿರ್ದೇಶನವನ್ನು ಮಾಡಿದ್ದಾರೆ. ವಿಜಯ್ ಕಿರಗಂದುರ್ ಈ ಚಿತ್ರದ ನಿರ್ಮಾಪಕರು. 

ಪ್ರೇಮಿಂಚಿಕುಂದಾಮ್ರ,  ಬಾವಗರು ಬಾಗುನ್ನರ, ಪ್ರೇಮಾಂಟೆ ಈಡೇರ, ಟಕ್ಕರಿ ಡೊಂಗ, ಈಶ್ವರ್, ಲಕ್ಷ್ಮಿ ನರಸಿಂಹ, ಶಂಕರ ದಾದಾ ಎಂ ಬಿ ಬಿ ಎಸ್, ಸಖಿಯ, ಅಲ್ಲಾರೀ ಪಿಡುಗು, ತೀನ್ ಮಾರ್ ಅಂತಹ ದೊಡ್ಡ ಬಜೆಟ್ಟಿನ ಹಾಗೂ ದೊಡ್ಡ ನಟರುಗಳ ಚಿತ್ರಗಳ ನಿರ್ದೇಶನ ಮಾಡಿದವರು ಜಯಂತ್ ಪರಂಜಿ ಅವರು. 

ಅಮೆರಿಕ ದೇಶದಲ್ಲಿ ಕೆಲವು ಆಕ್ರಮಣಕಾರಿ ಸನ್ನಿವೇಶಗಳು ಹಾಗೂ ಮಾತಿನ ಭಾಗ, ಹಾಡುಗಳನ್ನು ಚಿತ್ರೀಕರಣ ೪೦ ದಿವಸಗಳಲ್ಲಿ ಮಾಡುವುದಕ್ಕೂ ಮುಂಚೆ `ನಿನ್ನಿಂದಲೇ` ಚಿತ್ರವು ೨೦ ದಿವಸಗಳ ಚಿತ್ರೀಕರಣವನ್ನು ಕಂಠೀರವ ಸ್ಟುಡಿಯೋ, ಎಫ್ ಬಾರ್, ಒರಿಒನ್ ಮಾಲ್ ಕಾಫಿ ಶಾಪ್ ಹಾಗೂ ಮೂರು ದಿವಸಗಳ ಚಿತ್ರೀಕರಣ ಹೈದರಾಬಾದ್ ಅಲ್ಲಿ ಮುಗಿಸಿಕೊಂಡಿದೆ. 

ಚಿನ್ನಿ ಪ್ರಾಕಾಶ್, ಕಲ್ಯಾಣ್ ಮಾಸ್ಟೆರ್ ಹಾಗೂ ರಾಜು ಸುಂದರಂ ಈ ಚಿತ್ರದ ನೃತ್ಯ ನಿರ್ದೇಶಕರು.`ನಿನ್ನಿಂದಲೇ` ನ್ಯೂ ಯಾರ್ಕ್ ಅಲ್ಲಿ ಚಿತ್ರೀಕರಣ ಮಾಡುವುದಕ್ಕಾಗಿ ಸ್ವದೇಶದ ಮೂರು ಹಾಗೂ ವಿದೇಶದ ಕೆಲವು ಕ್ಯಾಮರಗಳನ್ನು ಬಳಸಲಾಗಿದೆ. 

ಮಣಿ ಶರ್ಮ ಅವರ ಸಂಗೀತ ಇರುವ ಈ ಚಿತ್ರದ ಸಂಕಲನಕಾರ ಮಾರ್ತಾಂಡ ಕೆ ಪ್ರಕಾಶ್, ನಿರ್ದೇಶಕ ಜಯಂತ್ ಸಿ ಪರಂಜಿ ಅವರ ಜೊತೆ ಶಂಕರ್ ಅವರು ಚಿತ್ರಕಥೆ ನೆರವು ನೀಡಿದ್ದಾರೆ. ಪಿ ಜಿ ವಿಂಧಾ ಅವರು ಈ ಚಿತ್ರದ ಛಾಯಾಗ್ರಾಹಕರು. 

ಪೋಷಕ ಪಾತ್ರಗಳಲ್ಲಿ ಅವಿನಾಷ್ ಶೃಂಗೇರಿ (ಜುಗಾರಿ) ವಿನಾಯಕ್ ಜೋಷಿ, ಸೋನಿಯ ದೀಪ್ತಿ, ಆಲೋಕ್ ಬಾಬು, ಅವಿನಾಷ್, ಅಚ್ಯುತ್ ಕುಮಾರ್, ಸಾಧು ಕೋಕಿಲ, ರಂಗಾಯಣ ರಘು, ಪ್ರತಾಪ್, ಶ್ರೀ ನಿವಾಸ್ ಪ್ರಭು, ಸಿಹಿಕಹಿ ಚಂದ್ರು, ರೋಹಿಣಿ ರಘುವರನ್ ಹಾಗೂ ಇತರರು ಇದ್ದಾರೆ.


 

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ನಿನ್ನಿಂದಲೇ` ಈ ವಾರ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.